ಕೃತಕ ಬುದ್ಧಿಮತ್ತೆಯನ್ನು ಬಳಸಿ ಚಿತ್ರಗಳನ್ನು ವಿಡಿಯೋಗಳನ್ನು ಸೃಷ್ಟಿಸುವುದು ಸುಲಭ. ಕೃತಕ ಬುದ್ಧಿಮತ್ತೆಯ ಸಹಾಯದಿಂದ ಸೃಷ್ಟಿ ಮಾಡುತ್ತಿರುವ ಚಿತ್ರಗಳು ಮತ್ತು ವಿಡಿಯೋಗಳ ಉದ್ದೇಶ ಒಳ್ಳೆಯದೇ ಆಗಿದ್ದರೆ ಯಾವುದೇ ಸಮಸ್ಯೆಯಿಲ್ಲ. ಆದರೆ ಅದು ಯಾವುದೋ ವ್ಯಕ್ತಿಯ, ಸಂಘ ಸಂಸ್ಥೆಯ ತೇಜೋವಧೆಯ ದುರುದ್ದೇಶದಿಂದ ಬಳಕೆಯಾದರೆ ಅದು ಸಮಾಜ ಘಾತಕವೇ. ವಿಡಿಯೋಗಳು ಅತ್ಯಾಕರ್ಷಕವಾಗಿದೆ ಎನ್ನುವ ಕಾರಣಕ್ಕಷ್ಟೇ ಅದು ಹೇಳುತ್ತಿರುವ ಕಥೆಯನ್ನು ನಂಬಬೇಕಾಗಿಲ್ಲ. ಆದ್ದರಿಂದ ನಾವು ವೀಕ್ಷಿಸುತ್ತಿರುವ ವಿಡಿಯೋ ಸಹಜ ದೃಶ್ಯವೇ ಅಥವಾ ಕೃತಕವಾಗಿ ರಚಿಸಿದ್ದೇ ಎನ್ನುವ ಜ್ಞಾನ ಇರಬೇಕಾಗುತ್ತದೆ.
ಕೃತಕ ಬುದ್ಧಿಮತ್ತೆ (AI) ಚಿತ್ರ ಹಾಗೂ ವಿಡಿಯೋಗಳ ಬಗ್ಗೆ ನಿಮಗಿದು ತಿಳಿದಿರಲಿ
೧. ಚಿತ್ರಗಳು:
ಪರಿಪಕ್ವ, ಪರಿಪೂರ್ಣ: AI-ರಚಿತ ಚಿತ್ರಗಳು ವಾವ್ ಎನಿಸುವಷ್ಟು ಸುಂದರವಾಗಿರುತ್ತವೆ. ʼ೧೮ರ ಹರೆಯದ ಹುಡುಗಿʼ ಎಂದರೆ, ನಾವು ಸಿನಿಮಾದಲ್ಲಿ ನೋಡುತ್ತೇವಲ್ಲ ಅಂತಹಾ ಪರಿಪೂರ್ಣ ಸೌಂದರ್ಯ. "ನಂಬಲು ಕಷ್ಟ" ಎನ್ನುವಷ್ಟು ಸುಂದರವಾಗಿರುತ್ತದೆ!. ಚರ್ಮ ಎಂದರೆ ಅಷ್ಟು ನುಣುಪು, ಅಷ್ಟು ನಾಜೂಕು. ನೈಸರ್ಗಿಕವಾಗಿ ಚರ್ಮದಲ್ಲಿ ಇರಬಹುದಾದ ರಂಧ್ರಗಳು, ಅಸಮವಾದ ಮುಖದ ಲಕ್ಷಣಗಳು ಅಥವಾ ಅಸ್ತವ್ಯಸ್ತವಾದ ಕೂದಲು ಇರುವುದಿಲ್ಲ. ಬದಲಿಗೆ, ಎಲ್ಲವೂ ಪರಿಪೂರ್ಣವಾಗಿ, ನಯವಾಗಿ ಕಾಣಿಸುತ್ತವೆ.
ಹಿನ್ನೆಲೆ:
ಹಿನ್ನೆಲೆಗಳು ಮಸುಕಾಗಿ ಅಥವಾ ಕೃತಕ ಎನಿಸುವ ವಸ್ತುಗಳನ್ನು, ಮರ ಗಿಡಗಳನ್ನು ಹೊಂದಿರಬಹುದು. ವಿರೂಪಗೊಂಡ ಅಥವಾ ನಿಮ್ಮನ್ನು ಗೊಂದಲಗೊಳಿಸುವ ವಸ್ತುಗಳು ಇರಬಹುದು.
ಅಕ್ಷರಗಳು
ಮತ್ತು ಪದಗಳು: AI, ಸ್ಪಷ್ಟ
ಪದಗಳನ್ನು ಮತ್ತು ಸಹಜ ಎನಿಸುವ ಅಕ್ಷರಗಳನ್ನು ರಚಿಸುವಲ್ಲಿ
ಇನ್ನೂ ಪರಿಪೂರ್ಣತೆ ಸಾಧಿಸಿಲ್ಲ. ಚಿತ್ರದ
ಹಿನ್ನೆಲೆಯಲ್ಲಿ ಯಾವುದಾದರೂ ಫಲಕಗಳಿದ್ದಲ್ಲಿ ಅಥವಾ
ಪುಸ್ತಕಗಳಿದ್ದಲ್ಲಿಅದರ ಮೇಲಿನ ಅಕ್ಷರಗಳು ಗೊಂದಲಮಯವಾಗಿರುತ್ತದೆ.
ನೆರಳು ಬೆಳಕಿನಾಟ:
ವ್ಯಕ್ತಿಯ ಮುಖದ ಮೇಲೆ ಬೆಳಕು
ಸರಿಯಾಗಿ ಬೀಳದಿದ್ದರೆ, ಅಥವಾ ಸುತ್ತಲಿರುವ ಬೆಳಕು ಮತ್ತು ನೆರಳು
ಹೊಂದಿಕೆಯಾಗದಿದ್ದರೆ, ಅದು ನಕಲಿ ಚಿತ್ರ
ಆಗಿರಬಹುದು.
ಮೆಟಾಡೇಟಾ ವಿಶ್ಲೇಷಣೆ: ಚಿತ್ರದ ಗುಣಲಕ್ಷಣಗಳನ್ನು ("Properties" ಅಥವಾ "Get Info") ಪರಿಶೀಲಿಸಿ. ಇದು ಫೈಲ್ ರಚಿಸಲು ಬಳಸಿದ ಸಾಫ್ಟ್ವೇರ್ ಮತ್ತು ಸಮಯವನ್ನು ತಿಳಿಸುತ್ತದೆ.
೨. ವೀಡಿಯೊಗಳು
ಧ್ವನಿ
ಮತ್ತು ದೃಶ್ಯದ ಅಸಮಂಜಸತೆ: ಮಾತನಾಡುವ ವ್ಯಕ್ತಿಯ ತುಟಿಗಳ ಚಲನೆ ಧ್ವನಿಯೊಂದಿಗೆ ಹೊಂದಾಣಿಕೆ
ಆಗುತ್ತಿದೆಯೇ ಎಂದು ಪರಿಶೀಲಿಸಿ. ಅಥವಾ
ಧ್ವನಿ ಯಲ್ಲಿ ಯಾವುದೇ ಏರಿಳಿತವಿಲ್ಲದೆ ಯಾಂತ್ರಿಕವಾಗಿದೆಯೇ
ಎಂದು ಗಮನಿಸಿ. ಹಾಗಿದ್ದರೆ ಅದು ಕೃತಕವಾಗಿರಬಹುದು.
ಅಸ್ವಾಭಾವಿಕ
ಚಲನೆ: ವಿಡಿಯೋದಲ್ಲಿರುವ ವ್ಯಕ್ತಿಯ ಮುಖದ ಭಾವನೆಗಳು, ಕಣ್ಣುಗಳ
ಮಿಟುಕಿಸುವಿಕೆ ಅಥವಾ ತುಟಿಗಳ ಚಲನೆ
ಅಸ್ವಾಭಾವಿಕವಾಗಿದೆಯೇ ಎಂದು ಗಮನಿಸಿ. ವೀಡಿಯೊದಲ್ಲಿನ
ಚಲನೆಗಳು ಯಾಂತ್ರಿಕವಾಗಿ (robotic) ಅಥವಾ ನಡುಗಿದಂತೆ ಇದ್ದರೆ
ಅದು ಕೃತಕ ವಿಡಿಯೋ
ಮಸುಕಾದ
(Blurry) ಭಾಗಗಳು: ನಕಲಿ ವಿಡಿಯೋಗಳಲ್ಲಿ ಹೆಚ್ಚಾಗಿ
ವ್ಯಕ್ತಿಯ ಮುಖದ ಸುತ್ತಲಿನ ಭಾಗಗಳು
ಮಸುಕಾಗಿ ಅಥವಾ ಸರಿಯಾದ ರೂಪದಲ್ಲಿರುವುದಿಲ್ಲ
ಎನ್ನುವುದನ್ನು ಗಮನಿಸಿ.
ಈ ಮೇಲಿನ ವಿಧಾನಗಳಿಂದ
ನಿಮ್ಮ ಸಂಶಯ ಪರಿಹಾರವಾಗದಿದ್ದರೆ ವಿಶ್ವಾಸಾರ್ಹ ಸತ್ಯಶೋಧನಾ
ಸಂಸ್ಥೆಗಳ
(Fact-Checking Organizations) ಸಹಾಯ
ಪಡೆಯಬಹುದು.
ನಿಮ್ಮ
ಕೈಯಲ್ಲಿರುವ ವಿಡಿಯೋ ನಕಲಿಯೇ ಎಂದು ಅನುಮಾನವಿದ್ದರೆ, ಪ್ರಮುಖ
ಸತ್ಯಶೋಧನಾ ಸಂಸ್ಥೆಗಳ ವೆಬ್ಸೈಟ್ಗಳನ್ನು
ಪರಿಶೀಲಿಸಿ. ಈ ಸಂಸ್ಥೆಗಳು ನಕಲಿ
ವಿಡಿಯೋಗಳು ಮತ್ತು ಸುದ್ದಿಗಳನ್ನು ಈಗಾಗಲೇ ಪರಿಶೀಲಿಸಿ ಅದರ ಕುರಿತು ವರದಿ
ಪ್ರಕಟಿಸಿರುತ್ತವೆ.
ಭಾರತದಲ್ಲಿನ
ಕೆಲವು ಪ್ರಮುಖ ಸಂಸ್ಥೆಗಳು: ಬೂಮ್ ಲೈವ್ (BOOM Live), ಆಲ್ಟ್ ನ್ಯೂಸ್ (Alt News), ಮತ್ತು ಇಂಡಿಯಾ ಟುಡೆ ಫ್ಯಾಕ್ಟ್ ಚೆಕ್
(India Today Fact Check). ಇವುಗಳು
ತಮ್ಮ ವೆಬ್ಸೈಟ್ನಲ್ಲಿ
ಪರಿಶೀಲಿಸಿದ ಮಾಹಿತಿಗಳನ್ನು ಪ್ರಕಟಿಸುತ್ತವೆ.
ಚಿತ್ರ
ಮತ್ತು ವೀಡಿಯೊ ಪತ್ತೆಹಚ್ಚುವ ತಂತ್ರಜ್ಞಾನ ಆಧಾರಿತ ಟೂಲ್ ಗಳು:
Hive AI-Generated Content Detection: Sensity AI, Deepware, Sightengine ಮೊದಲಾದ ಟೂಲ್ ಗಳು ಚಿತ್ರಗಳು,
ವೀಡಿಯೊಗಳು ಮತ್ತು ಧ್ವನಿಯನ್ನು ಸ್ಕ್ಯಾನ್ ಮಾಡಿ, ಅವು ನಕಲಿಯೇ ಅಥವಾ
ನೈಜವೇ ಎಂದು ತಿಳಿಸುತ್ತವೆ.
ಇದು ಪೇಯ್ಡ್ ಸೇವೆ ಆದ್ದರಿಂದ ಕಂಪನಿಗಳು
ಖರೀದಿಸಬಹುದು.
AI ತಂತ್ರಜ್ಞಾನ
ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವುದರಿಂದ, ಅವುಗಳನ್ನು
ಪತ್ತೆಹಚ್ಚುವ ಸಾಧನಗಳೂ ನಿರಂತರವಾಗಿ ವಿಕಸನಗೊಳ್ಳುತ್ತಿವೆ. ಆದ್ದರಿಂದ,
ಕೇವಲ ಒಂದು ಮೂಲವನ್ನಷ್ಟೇ ಸತ್ಯಾಂಶ ಪತ್ತೆಗೆ ಅವಲಂಬಿಸುವುದು ಸೂಕ್ತವಲ್ಲ. ಯಾವುದೇ ಸುದ್ದಿಯ ಭಾಗವಾಗಿರುವ ಚಿತ್ರ ಅಥವಾ ವೀಡಿಯೊವನ್ನು ಹಲವಾರು
ವಿಶ್ವಾಸಾರ್ಹ ಸುದ್ದಿ ಮೂಲಗಳಲ್ಲಿ ಪರಿಶೀಲಿಸುವುದು ಉತ್ತಮ.
(ಮುಂದಿನ ಭಾಗದಲ್ಲಿ:
ಅಂತರ್ಜಾಲದಲ್ಲಿ ಲಭ್ಯವಿರುವ Fact checking ತರಬೇತಿಗಳು)
ಗೀತಾ ಎ.ಜೆ
No comments:
Post a Comment