ಇಂದಿನ ತಂತ್ರಜ್ಞಾನ ಆಧಾರಿತ ಯುಗದಲ್ಲಿ, ಸುಳ್ಳು ಸುದ್ದಿಗಳು (Fake News) ಮತ್ತು ತಪ್ಪು ಮಾಹಿತಿಯನ್ನು (Misinformation) ಗುರುತಿಸುವುದೇ ದೊಡ್ಡ ಸವಾಲು. ಒಂದು ಸುಳ್ಳು ಸುದ್ದಿ ಕ್ಷಣಾರ್ಧದಲ್ಲಿ ವೈರಲ್ ಆಗಿ ಸಮಾಜದ ಮೇಲೆ ದೊಡ್ಡ ಪರಿಣಾಮ ಬೀರಬಹುದು. ಯಾವುದೇ ಮಾಹಿತಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುವ ಕೌಶಲ್ಯ (Fact-Checking Skill) ನಮ್ಮಲ್ಲಿದ್ದರೆ, ಮಾಹಿತಿ ಮಾಲಿನ್ಯದ ವಿರುದ್ದದ ಹೋರಾಟದಲ್ಲಿ ನಮ್ಮ ಕೈ ಜೋಡಿಸಬಹುದು.
ಕೆಲವೊಂದು
ಸಂಸ್ಥೆಗಳು ಉಚಿತ ಆನ್‌ಲೈನ್ ತರಬೇತಿಗಳನ್ನು
ಒದಗಿಸುತ್ತಿವೆ. ನಿಮ್ಮನ್ನು ನೀವು ಜವಾಬ್ದಾರಿಯುತ ಡಿಜಿಟಲ್ ಪ್ರಜೆಯಾಗಿ ರೂಪಿಸಿಕೊಳ್ಳಲು ಲಭ್ಯವಿರುವ
ನಾಲ್ಕು ಅತ್ಯುತ್ತಮ ಉಚಿತ ಕೋರ್ಸ್‌ಗಳ ವಿವರ ಇಲ್ಲಿದೆ.
ಗೂಗಲ್ ನ್ಯೂಸ್
ಇನಿಶಿಯೇಟಿವ್‌ನ ಫ್ಯಾಕ್ಟ್-ಚೆಕಿಂಗ್ ಟೂಲ್ಸ್
Google
News Initiative Training ಹೆಸರಿನಲ್ಲಿ ಲಭ್ಯವಿರುವ
ಈ ಕೋರ್ಸ್, ಫ್ಯಾಕ್ಟ್-ಚೆಕಿಂಗ್ ಪರಿಕರಗಳನ್ನು ಬಳಸುವುದರ
ಬಗ್ಗೆ ಪ್ರಾಯೋಗಿಕ ತರಬೇತಿ ನೀಡುತ್ತದೆ. ನೀವು ಗೂಗಲ್ ರಿವರ್ಸ್ ಇಮೇಜ್ ಸರ್ಚ್, ಗೂಗಲ್ ಅರ್ಥ್ ಪ್ರೋ,
ಮತ್ತು ಗೂಗಲ್ ಟ್ರೆಂಡ್ಸ್‌ನಂತಹ ಸಾಧನಗಳನ್ನು ಬಳಸಿ, ವೈರಲ್ ಆಗಿರುವ ಯಾವುದೇ ಚಿತ್ರ, ವಿಡಿಯೋ, ಅಂಕಿ
ಅಂಶಗಳು ಅಥವಾ ಮಾಹಿತಿಯ ನಿಜವಾದ ಮೂಲ ಮತ್ತು ಹಿನ್ನೆಲೆಯನ್ನು ಹೇಗೆ ಪತ್ತೆ ಹಚ್ಚುವುದು ಎಂಬುದನ್ನು
ಆಳವಾಗಿ ಕಲಿಯಬಹುದು. ಆನ್ಲೈನ್ ತರಬೇತಿ ಆಗಿರುವ ಕಾರಣ ಮೊಬೈಲ್ ಬಳಕೆ ಮತ್ತು ಅಂತರ್ಜಾಲದ ಬಳಕೆ
ಕುರಿತು ಅರಿವಿದ್ದವರು ಈ ಕೋರ್ಸ್ ಮಾಡಬಹುದು.
https://newsinitiative.withgoogle.com/
Hands-on
Fact-checking: A Short Course
ಅಂತರರಾಷ್ಟ್ರೀಯ
ಸತ್ಯಶೋಧನಾ ನೆಟ್‌ವರ್ಕ್ (IFCN) ಸಹಯೋಗದೊಂದಿಗೆ Poynter's News University ಈ ತರಬೇತಿಯನ್ನು ನೀಡುತ್ತಿದೆ. “ನಿಮ್ಮ ಕೈಯಲ್ಲಿ ಸತ್ಯಶೋಧನೆ" ಎಂಬ ಹೆಸರಿಗೆ ತಕ್ಕಂತೆ,
ಸತ್ಯಶೋಧನೆಯ ಅತ್ಯಂತ ಪ್ರಾಯೋಗಿಕ ತಂತ್ರಗಳನ್ನು ಕಲಿಸುತ್ತದೆ. ವಿಶ್ವಾಸಾರ್ಹ ಮೂಲಗಳನ್ನು ಗುರುತಿಸುವುದು, ಮತ್ತು ಉದ್ದೇಶಪೂರ್ವಕವಾಗಿ
ಹರಡುವ ಸುಳ್ಳು ಮಾಹಿತಿಯನ್ನು ಪತ್ತೆಹಚ್ಚುವ ತಂತ್ರಗಳ
ಕುರಿತು ಇಲ್ಲಿ ವಿವರಿಸಲಾಗಿದೆ.
https://www.poynter.org/shop/fact-checking-media-literacy/handson-factchecking/
Crash
Course on Navigating Digital Information
ಜಾನ್
ಗ್ರೀನ್ ಅವರು ಮೀಡಿಯಾವೈಸ್ ಮತ್ತು ಇತರ ಸಂಸ್ಥೆಗಳ ಜೊತೆ ಸೇರಿ ಯೂಟ್ಯೂಬ್ ನಲ್ಲಿ 10 ಎಪಿಸೋಡ್‌ಗಳ
ಒಂದು ಕೋರ್ಸ್ ಮಾಡಿದ್ದಾರೆ. ಈ ಕೋರ್ಸ್‌ನಲ್ಲಿ ನೀವು, ಫ್ಯಾಕ್ಟ್-ಚೆಕಿಂಗ್‌ಗೆ ಬೇಕಾದ ಕೌಶಲ್ಯಗಳನ್ನು
ಕಲಿಯಬಹುದು. ಮುಖ್ಯವಾಗಿ ಒಂದು ಮಾಹಿತಿ ಮೂಲವನ್ನು ವಿವಿಧ ಮೂಲದಿಂದ ಪರಿಶೀಲಿಸುವುದು. ವಿಡಿಯೋ ಮತ್ತು
ಇನ್ಫೋಗ್ರಾಫಿಕ್ಸ್‌ಗಳಂತಹ ಪುರಾವೆಗಳನ್ನು ಪರೀಕ್ಷಿಸುವುದು, ಸರ್ಚ್ ಇಂಜಿನ್‌ಗಳು ಮತ್ತು ಸಾಮಾಜಿಕ
ಮಾಧ್ಯಮಗಳು ಹೇಗೆ ಕೆಲಸ ಮಾಡುತ್ತವೆ ಎಂದು ಅರ್ಥಮಾಡಿಕೊಳ್ಳುವುದು ಇತ್ಯಾದಿ. ಇದರ ಜೊತೆಗೆ ಉತ್ತಮ
ಡಿಜಿಟಲ್ ಹವ್ಯಾಸ ಬೆಳೆಸಿಕೊಳ್ಳುವುದು ಹೇಗೆ ಎಂಬುದನ್ನೂ ತಿಳಿದುಕೊಳ್ಳಬಹುದು.
https://www.youtube.com/playlist?list=PL8dPuuaLjXtN07XYqqWSKpPrtNDiCHTzU
Free
Course on Alison: "Fact Checking 101"
Alison
e-Learning Platform ನಲ್ಲಿ ಲಭ್ಯವಿರುವ ಸತ್ಯಶೋಧನೆಯ ಇತಿಹಾಸ, ಅದರ ಪ್ರಾಮುಖ್ಯತೆ, ಮತ್ತು ವಿವಿಧ
ದಾಖಲೆಗಳಲ್ಲಿನ ಅಂಶಗಳನ್ನು ಪರಿಶೀಲಿಸುವ ಪ್ರಾಯೋಗಿಕ ಉದಾಹರಣೆಗಳನ್ನು ಇದು ಒಳಗೊಂಡಿದೆ. ಸತ್ಯಾ ಸತ್ಯತೆಯನ್ನು
ಹೇಗೆ ಪರೀಕ್ಷಿಸಬೇಕು, ಅದರ ಹಿನ್ನೆಲೆ ಮತ್ತು ಅದು ಏಕೆ ಮುಖ್ಯ ಎಂಬ ವಿಷಯಗಳನ್ನು ಈ ಕೋರ್ಸ್ ಕಲಿಸುತ್ತದೆ.
ಇದರಲ್ಲಿ ವಿವಿಧ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ಪರಿಶೀಲಿಸುವ ಪ್ರಾಯೋಗಿಕ ಉದಾಹರಣೆಗಳೂ ಇವೆ.
ಈ ಕೋರ್ಸ್ ಉಚಿತವಾಗಿ ಲಭ್ಯವಿದ್ದು ಅಧಿಕೃತ ಪ್ರಮಾಣಪತ್ರ (Certificate) ಬೇಕಾದರೆ, ಹಣ ಪಾವತಿಸಬೇಕಾಗುತ್ತದೆ.
ಈ
ಮೇಲಿನ ಆನ್‌ಲೈನ್ ಕೋರ್ಸ್‌ಗಳು fact checking ಕೌಶಲ್ಯವನ್ನು ತಿಳಿದುಕೊಳ್ಳಲು ನಿಮಗೆ ಸಹಾಯ ಮಾಡುತ್ತವೆ. ಸುಳ್ಳು ಸುದ್ದಿ
(Fake News) ಮತ್ತು ತಪ್ಪು ಮಾಹಿತಿ ತುಂಬಾ ವೇಗವಾಗಿ ಹರಡುತ್ತಿರುವ ಇಂದಿನ ಕಾಲಮಾನದಲ್ಲಿ ಯಾವುದೇ
ಮಾಹಿತಿಯನ್ನು ನಂಬುವ ಮುನ್ನ ಅದನ್ನು ಪರೀಕ್ಷಿಸುವ ಕೌಶಲ್ಯ ಕಲಿಯುವುದು ತುಂಬಾನೇ ಮುಖ್ಯ. ಈ ಕೋರ್ಸ್‌ಗಳನ್ನು
ಬಳಸಿಕೊಂಡು, ಸತ್ಯವನ್ನು ತಿಳಿದುಕೊಳ್ಳುವ ಮತ್ತು
ಜನರಿಗೆ ತಿಳಿಸುವ ಪ್ರಕ್ತಿಯೆಯಲ್ಲಿ ಪಾತ್ರವಹಿಸಬಹುದು.
ಗೀತಾ ಎ.ಜೆ
No comments:
Post a Comment