Friday, October 29, 2010

ನಾನು ನಾನಾಗೋ ಸಮಯವಿದು....

ಇದು ಒಂಟಿತನವಲ್ಲ... ಬೋರಿಂಗ್ ಅಲ್ಲವೇ ಅಲ್ಲ...
 ಇದು ನಾನು ನಾನಾಗೋ ಅಥವಾ ನೀವು ನೀವಾಗೋ ಸಮಯ. ನಿಮ್ಮ ಅಂತರಂಗವನ್ನು ಹೊಕ್ಕು ನೋಡೋ ಕ್ಷಣವಿದು. ಈ ಕ್ಷಣವಿದೆಯಲ್ಲಾ ಅದೊಂದು ತರಹಾ ವಾಲೆಂಟರಿ ರಿಟೈರ್ಮೆಂಟ್ ಇದ್ದ ಹಾಗೆ. ಈ ಪ್ರಪಂಚದ ಗೊಜಲಿನಿಂದ, ನಮ್ಮ ಮೇಲೆ ಪ್ರಭಾವ ಬೀರುವ ಪೂವರ್ಾಗ್ರಹಗಳಿಂದ ದೂರವಾಗೋ ಏಕಾಂತ. ಇಲ್ಲಿ ನೀವು ಮತ್ತು ನೀವು ಮಾತ್ರ. ನೀವೆಂದರೆ ಸಿಂಗ್ಯುಲರ್. ಈ ಏಕಾಂತದಲ್ಲಿ ಸಂತೋಷವಿರಬಹುದು. ದು:ಖ ಇರಬಹುದು. ಅಥವಾ ಸಮಸ್ಯೆಯೇ ಇರಬಹುದು. ಅಲ್ಲಿ ನಿಮಗೆ ಮತ್ತು ನಿಮ್ಮ ಭಾವನೆಗಳಿಗೆ ಮಾತ್ರ ಜಾಗ. ಉಳಿದೆಲ್ಲದಕ್ಕೂ ಸ್ಟ್ರಿಕ್ಟ್ ವೀಸಾ.


ಸದಾ ಕೆಲಸ, ಸಂಸಾರ ಎಂದು ಜಿಡ್ಡುಕಟ್ಟಿದ ಜೀವನವನ್ನು ಆಗಾಗ ರಿನಿವಲ್ ಮಾಡಬೇಕಾಗುತ್ತದೆ. ಜೀವನ ಸುಗಮವಾಗಿ ಚಲಿಸಲು ಬ್ಯಾಟರಿ ರೀಚಾಜರ್್ ಮಾಡಬೇಕಾಗುತ್ತದೆ. ಆದರೆ ಇಲ್ಲಿ ರೀಚಾಜರ್್ ಮಾಡೋದು ಹೊಸ ಹುರುಪಿನಿಂದ, ಧನಾತ್ಮಕ ಯೋಚನೆಗಳಿಂದ ಹಾಗೂ ಉತ್ಸಾಹದಿಂದ.

ಮನಸ್ಸಿನ ಜೊತೆ ಮಾತನಾಡಿ
ನಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳೊದಿಲ್ಲ ಎಂದು ಇನ್ನೊಬ್ಬರನ್ನು ದೂರುವ ಮೊದಲು ನಮ್ಮ ಭಾವನೆಗಳನ್ನು ನಾವೇಷ್ಟು ಅರ್ಥ ಮಾಡಿಕೊಂಡಿದ್ದೇವೆ ಎನ್ನುವುದನ್ನು ಯೋಚಿಸಬೇಕು. ನಮಗೆ ನಾವು ಅರ್ಥವಾಗಬೇಕಾದರೆ ಆಗಾಗ ಮನಸ್ಸಿನೊಂದಿಗೆ ಮಾತನಾಡಬೇಕಾಗುತ್ತದೆ. ಇಲ್ಲದಿದ್ದರೆ ಮನಸ್ಸು ನಮ್ಮಿಂದ ದೂರವಾಗುತ್ತದೆ. ಆಗ ನಾವು ನಾವಾಗಿರೋದಿಲ್ಲ. ನಮ್ಮ ನಡೆಗಳೆಲ್ಲಾ ಇನ್ನೊಬ್ಬರ ಆಸಕ್ತಿಯಂತಿರುತ್ತದೆ. ನಾವು ನಾವಾಗಬೇಕಾದರೆ ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು. ಮನಸ್ಸಿನ ಜೊತೆ ಮಾತನಾಡೋ ಕ್ಷಣದ ಮಟ್ಟಿಗೆ ನಾವು ಫ್ರೀಯಾಗಿ ಇರಬೇಕಷ್ಟೆ. ಮನಸ್ಸು ರಿಲ್ಯಾಕ್ಸ್ ಆಗಬೇಕು. ಯಾವುದೇ ಕಮಿಟ್ಮೆಂಟ್ಗಳಿರಬಾರದು. ತೊಂದರೆ ಕೊಡಲು ಅಲ್ಲಿ ಯಾರೂ ಇರಬಾರದು.

ಸದಾ ಚಾಟರ್ ಬಾಕ್ಸ್ ತರಹ ಇರೋ ಹುಡುಗಿ ಕೂಡಾ ಒಮ್ಮೊಮ್ಮೆ "ಡೋಂಟ್ ಡಿಸ್ಟಬರ್್'' ಎಂದು ಬಾಗಿಲು ಹಾಕಿಕೊಂಡಿರುತ್ತಾಳೆ. ಯಾಕೆಂದರೆ ಅವಳಿಗೆ ಗೊತ್ತು ಎಲ್ಲಾ ಸಮಸ್ಯೆಗಳಿಗೆ ಮಾತೇ ಪರಿಹಾರವಲ್ಲ...ಮೌನವೂ ಪರಿಹಾರವಾಗುತ್ತದೆ. ಕೆಲವೊಮ್ಮೆ ಮಾತನಾಡಿ ಪರಿಹರಿಸಿಕೊಳ್ಳುವ ಬದಲು ಮೌನವಾಗಿಯೂ ಪರಿಹರಿಸಿಕೊಳ್ಳಬಹುದು.

ಏಕಾಂತವೆಂದರೆ ಧ್ಯಾನವಲ್ಲ
ಏಕಾಂತವಾಗಿರುವುದು ಎಂದರೆ ಸುಮ್ಮನೆ ಕುಳಿತು ಧ್ಯಾನ ಮಾಡುವುದೆಂದಲ್ಲ. ಎಲ್ಲರ ನಡುವಿದ್ದೂ ಇಲ್ಲದಂತೆ ಏಕಾಂತ ಅನುಭವಿಸುವುದು. ಮೆಲು ಸಂಗೀತವನ್ನು ಕೇಳುತ್ತಾ ಅದರಲ್ಲಿ ಲೀನವಾಗಿ ಹೋಗಬಹುದು. ಒಂಟಿಯಾಗಿ ದೂರ ಪಯಣ ಮಾಡಬಹುದು. ಲಾಂಗ್ ಡ್ರೈವ್ ಹೋಗಬಹುದು. ಅಥವಾ ಗಾರ್ಡನಿಂಗ್ ಮಾಡಬಹುದು... ಮನೆ ಕೆಲಸ ಮಾಡುತ್ತಲೂ ಈ ಸಂತೋಷ ಅನುಭವಿಸಬಹುದು.

ಏಕಾಂತದಲ್ಲಿ ಸಂತೋಷ
ಮನೆಯ ಮಹಡಿಯ ಮೇಲೆ ಒಬ್ಬರೇ ನಿಂತಿರುತ್ತೀರಿ ಎಂದಿಟ್ಟುಕೊಳ್ಳಿ... ತೇಲಿ ಬರುವ ತಂಗಾಳಿ.... ಮಿನುಗುಟ್ಟುವ ನಕ್ಷತ್ರಗಳು... ನಿಜವಾಗಿಯೂ ಈ ಸಂತಸ ಅನುಭವಿಸುವ ಮನಸ್ಸಿನವರಾದರೆ ಈ ಕ್ಷಣಗಳ ಮುಂದೆ ಯಾವುದೇ ಸಂತೋಷ ಸಾಟಿಯಲ್ಲ. ಇಲ್ಲಿಂದ ನಿಧಾನವಾಗಿ ನಿಮ್ಮ ಯೋಚನೆ ನಿಮ್ಮತ್ತ ಹೊರಳುತ್ತದೆ. ಒಬ್ಬನೇ ಎಷ್ಟು ದೀರ್ಘವಾಗಿ ಯೋಚಿಸುತ್ತೀರೋ... ಅಷ್ಟು ಬೇಗ ನಿಮ್ಮ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಯೋಚಿಸುತ್ತಾ ಹೊದಂತೆ ರಿಲ್ಯಾಕ್ಸ್ ಆಗುತ್ತೀರಾ... ಜೀವನದ ಬಗ್ಗೆ ಧನಾತ್ಮಕ ಯೋಚನೆ ಬರುತ್ತದೆ. ಇಷ್ಟೆನಾ ಜೀವನ ಎಂದು ತಿಳಿದುಕೊಂಡವರು ಮತ್ತೆ ಚಿಂತನೆ ನಡೆಸುತ್ತೀರಿ... ಆದರೆ ಇಗ ನಡೆಯೋದು ಸುಂದರವಾದ ಸಂತೋಷವಾದ ಮತ್ತು ಜೀವಿಸಬೇಕಾದ ಜೀವನದ ಬಗ್ಗೆ ಚಿಂತನೆ.

ಏಕಾಂತದಲ್ಲಿ ಮುಳುಗಿ ಹೋಗಬೇಡಿ
ದಿನದಲ್ಲಿ ಒಂದರ್ಧ ಗಂಟೆ ನಿಮ್ಮನ್ನು ನೀವು ಪರಾಮಶರ್ಿಸಿಕೊಳ್ಳುವುದಕ್ಕೆ ಸಮಯವಿರಿಸಿಕೊಂಡರೆ ಸಾಕು. ಅದರಲಲ್ಲೂ ವಾಸ್ತವ ವಿಚಾರಗಳಿರಲಿ. ದೀರ್ಘ ಕಾಲದ ಏಕಾಂತ ನಿಮ್ಮನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯುತ್ತದೆ. ಇದು ಅತ್ಯಂತ ಅಪಾಯಕಾರಿ. ವಾಸ್ತವ ಬದುಕನ್ನು ನೋಡಿದರೆ ಭ್ರಮನಿರಸನಕ್ಕೆ ಕಾರಣವಾಗುತ್ತದೆ. ಇದು ಹಲವಾರು ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು.

ನೆಗೆಟಿವ್ ಯೋಚನೆಗಳು ಬೇಡ
ನಿಮ್ಮ ಏಕಾಂತದಲ್ಲಿ ಬರುವ ಯೋಚನೆಗಳು ರಿಯಾಲಿಟಿಗೆ ಹತ್ತಿರವಾಗಲಿ. ಋಣಾತ್ಮಕ ಯೋಚನೆಗಳು ಬೇಡ. ನಿಮ್ಮನ್ನು ನೀವು ವಿಮಶರ್ಿಸಿಕೊಳ್ಳುತ್ತೀರಿ ಎಂದಾದರೆ ಅಲ್ಲಿ ಪಾರದರ್ಶಕತೆ ಇರಲಿ. ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಯೋಚನೆಗಳಾದರೆ ಅದು ಪಾರದರ್ಶಕವಾದ ಯೋಚನೆಗಳಲ್ಲ. ಬದುಕು ಇಷ್ಟ್ಟೆನಾ? ಅಥವಾ ಬದುಕಿದ್ದೇನು ಪ್ರಯೋಜನ? ಎನ್ನುವ ಯೋಚನೆಗಳು ಬೇಡವೇ ಬೇಡ. ಹಲವಾರು ಆತ್ಮಹತ್ಯೆಗಳು ಇಂತಹಾ ಯೋಚನೆಗಳಿಂದಲೇ ಜರುಗುತ್ತವೆ. ಒಂದು ವೇಳೆ ಪಲಾಯನ ವಾದದ ಯೋಚನೆಗಳು ಬಂದರೆ ಟ್ರಾಕ್ ತಪ್ಪಿಸಿ ಬೇರೆ ಕೆಲಸದತ್ತ ಗಮನಕೊಡಿ. ಇಂತಹ ಸಂದರ್ಭದಲ್ಲಿ ಏಕಾಂತಕ್ಕಿಂತ ಗುಂಪಿನಲ್ಲಿ ಕೆಲಸದ ಜೊತೆಗೆ ಇರುವುದು ಒಳಿತು.

ಕೊನೆಯದಾಗಿ, ಬದುಕು ತುಂಬಾ ಸಿಂಪಲ್. ಅದನ್ನು ಕ್ಲಿಷ್ಟ ಅಥವಾ ಸುಲಭ ಮಾಡಿಕೊಳ್ಳುವವರು ನಾವೇ ಆಗಿರುತ್ತೇವೆ.

-ಗೀತಾ ಬಿಳಿನೆಲೆ

4 comments:

  1. ಬಾರೀ ಬರ್ದೀರಲ್ಲ? ಚೆಂದಿದೆ.. ಹೀಗೆ ಮುಂದವರಿಸಿ... ನಾನು ಬೇರೆ ಕೆಲಸದತ್ತ ಗಮನ ಹರಿಸಲು ಪ್ರಯತ್ನ ಮಾಡುತ್ತೇನೆ..!!!

    ReplyDelete
  2. ಚೆನ್ನಾಗಿದೆ ಮೇಡಂ. ಇದು ಮೂರನೇ ಬಾರಿ ಓದುತ್ತಿರುವುದು.

    ReplyDelete
  3. AFTER READING THIS, PERSUES ME TO BE ALONE. BUT, HOW THE LONLYNESS ENDING? LONLINESS CAN'T SERVIVE IN THE NATURES END.

    ReplyDelete